Game Changer Kannada Movie ಈಗ ತಾನೇ ಈ ಸಿನಿಮಾನ ನೋಡಿದೆ ಈ ಮೂವಿ ನೋಡಿದ್ಮೇಲೆ ನನ್ನ ಒಪಿನಿಯನ್ ಕೇಳಿದ್ರೆ ಚೆನ್ನಾಗಿಲ್ಲ ಗುರು ಮೊದಲ ಒನ್ ಅಂತ ಹೈ ಇಂಟೆನ್ಸ್ ಪೊಲಿಟಿಕಲ್ ಡ್ರಾಮಾ ಸಿನಿಮಾ ತೆಗೆದಂತಹ ಶಂಕರ್ ಅವರೇನ ಈ ಸಿನಿಮಾನ ಡೈರೆಕ್ಟ್ ಮಾಡಿದ್ದು ಅಂತ ಡೌಟ್ ಬಂತು ಲಿಟ್ರಲಿ ಇಂಡಿಯನ್ ಟು ಸಿನಿಮಾದಲ್ಲಿ ಆ ಕರ್ಮಕಲೆ ಸಾರಿ ಮರ್ಮಕಲೆ ನೋಡಿದ್ಮೇಲೆ ಡೈರೆಕ್ಟರ್ ಶಂಕರ್ ಅವರ ಮೇಲೆ ಇದ್ದಂತಹ ನಂಬಿಕೆ ಸತ್ತು ಹೋಗಿತ್ತು ಆದರೂ ಕೂಡ ರಾಮಚರಣ್ ತೆಲುಗಿನ ಬ್ರಿಲಿಯಂಟ್ ಪ್ರೊಡ್ಯೂಸರ್ ಅಂತ ಹೇಳಲ್ಪಡುವ ದಿಲ್ರಾಜ್ ಅವರು ಪ್ರೊಡ್ಯೂಸ್ ಮಾಡ್ತಿದ್ದಾರೆ ಅಂದ್ರೆ ಏನೋ ಒಂದು ಸ್ವಲ್ಪ ಇರುತ್ತೆ ಅಂತ ಹೋಗಿದ್ದೆ ಆದರೆ ಪ್ರೊಡ್ಯೂಸರ್ ದಿಲ್ರಾಜ್ ಅವರ ಜಡ್ಜ್ಮೆಂಟ್ ಕೂಡ ಇಲ್ಲಿ
![]() |
game changer full movie online free |
ತಪ್ಪಾಗಿದೆ ಈ ಸಿನಿಮಾದ ದಲ್ಲಿ ಹಾಡುಗಳಿಗೆ ಸುಮಾರು 75 ಕೋಟಿ ಖರ್ಚು ಮಾಡಿದ್ದಾರಂತೆ ಆದರೂ ಕೂಡ ಒಂದು ಸಾಂಗ್ ಅನ್ನ ಟೆಕ್ನಿಕಲ್ ಇಶ್ಯೂಸ್ ಇಂದ ಈ ಸಿನಿಮಾದಲ್ಲಿ ಆಡ್ ಮಾಡಿಲ್ಲ ಇನ್ನು ಓವರ್ ಆಲ್ ಈ ಸಿನಿಮಾಗೆ 400 ರಿಂದ 500 ಕೋಟಿ ಬಜೆಟ್ ಆಗಿದೆ ಅಂತೆ ಆದರೆ ಸ್ಕ್ರೀನ್ ಮೇಲೆ ನೀವು ಸಿನಿಮಾ ನೋಡಬೇಕಂದ್ರೆ ಹಾಗೆ ಅನ್ಸಲ್ಲ ಖಂಡಿತ ಹಾಡುಗಳಲ್ಲಿ ಆ ಗ್ರಾಂಡ್ ವಿಶುವಲ್ಸ್ ನ ನೀವು ಕಾಣಬಹುದು ಆದರೆ ಸಿನಿಮಾ ನೋಡಿದ್ಮೇಲೆ ನಿಮಗೆ 400 ಕೋಟಿ ಎಲ್ಲಿ ಖರ್ಚಾಗಿದೆ ಅಂತ ಡೌಟ್ ಬಂದೆ ಬರುತ್ತೆ ಇನ್ನು ಸಿನಿಮಾದ ಪ್ಲಾಟ್ ವಿಷಯಕ್ಕೆ ಬರೋದಾದ್ರೆ ಐಎಎಸ್ ರಾಮನಂದನ್ ಹಾಗೂ ಕರಪ್ಟ್ ಮಿನಿಸ್ಟರ್ ಎಸ್ ಜೆ ಸೂರ್ಯ ಅವರ ನಡುವೆ ನಡೆಯುವಂತಹ ಕ್ಲಾಶ್ ಈ ಸಿನಿಮಾದ ಒನ್ ಲೈನ್
ಸ್ಟೋರಿ ಈ ಸಿನಿಮಾದಲ್ಲಿ ರಾಮಚರಣ್ ಅವರು ಡ್ಯೂಯಲ್ ರೋಲ್ ಅಲ್ಲಿ ಆಕ್ಟ್ ಮಾಡಿದ್ದಾರೆ ಅದರಲ್ಲೂ ಫ್ಲಾಶ್ ಬ್ಯಾಕ್ ಅಲ್ಲಿ ಬರುವಂತಹ ಅಪ್ಪಣ್ಣ ರೋಲ್ ನಮಗೆ ಇಷ್ಟ ಆಗುತ್ತೆ ಸಿನಿಮಾದಲ್ಲಿ ಈ ಕ್ಯಾರೆಕ್ಟರ್ ಗೆ ಒಂದು ವೀಕ್ನೆಸ್ ನ ಕೂಡ ಆಡ್ ಮಾಡಿದ್ದಾರೆ ಈ ಸಿನಿಮಾ ಕೂಡ ಎಲ್ಲಾ ರೊಟೀನ್ ಸಿನಿಮಾಗಳಂತೆ ಅನಾವಶ್ಯಕವಾದ ಸಾಂಗ್ಸ್ ಹಾಗೂ ರೊಟೀನ್ ಲವ್ ಸ್ಟೋರಿಯನ್ನ ಹೊಂದಿರುತ್ತೆ ಡೈರೆಕ್ಟರ್ ಶಂಕರ್ ಅವರು ಒಂದು ಇಂಟರ್ವ್ಯೂ ಅಲ್ಲಿ ಪೋಕಿರಿ ಹಾಗೂ ಒಕ್ಕಡು ಸಿನಿಮಾಗಳಂತೆ ಒಂದು ಕಮರ್ಷಿಯಲ್ ಸಿನಿಮಾನ ಮಾಡಬೇಕು ಅಂತ ತುಂಬಾ ದಿನಗಳಿಂದ ಅನ್ಕೊಂಡಿದ್ರಂತೆ ಆ ಆಸೆಯನ್ನ ಈ ಸಿನಿಮಾದಿಂದ ಈಡೇರಿಸಿಕೊಂಡಿದ್ದೇನೆ ಅಂತ ಹೇಳ್ಕೊಂಡಿದ್ರು ಖಂಡಿತ ಸಿನಿಮಾ ನೋಡಬೇಕಂದ್ರೆ ಆ ತರ ಫೀಲ್ ನಿಮಗೆ
ಆಗೋದೇ ಇಲ್ಲ ಇನ್ಫ್ಯಾಕ್ಟ್ ಒಂದು ಹಂತದಲ್ಲಂತೂ ನೀವು ಸಿನಿಮಾ ಯಾವಾಗ ಮುಗಿಯುತ್ತಪ್ಪ ಅಂತ ಕಾಯ್ತಾ ಇರ್ತೀರಾ ಸಿನಿಮಾ ತುಂಬಾ ಲ್ಯಾಗ್ ಆಗಿದ್ದು ನಿಮ್ಮ ಪೇಷನ್ಸ್ ನ ಟೆಸ್ಟ್ ಮಾಡೋದು ಗ್ಯಾರಂಟಿ ಓವರ್ ಆಲ್ ಸಿನಿಮಾದಲ್ಲಿ ನನಗೆ ಇಷ್ಟ ಆಗಿದ್ದು ಫ್ಲಾಶ್ ಬ್ಯಾಕ್ ಹಾಗೂ ಪ್ರೀ ಇಂಟರ್ವಲ್ ಅದು ಬಿಟ್ರೆ ನಿಮಗೆ ಎಲ್ಲೂ ಕೂಡ ಸಿನಿಮಾ ಇಂಟರೆಸ್ಟಿಂಗ್ ಆಗಿ ಅನ್ಸೋದೇ ಇಲ್ಲ ಸುಮಾರು ಎರಡು ಮುಕ್ಕಾಲು ಗಂಟೆ ಡ್ಯೂರೇಷನ್ ಇರುವಂತಹ ಈ ಸಿನಿಮಾನ ಹಿಡಿದಿಟ್ಟುಕೊಂಡಿರೋದು ಮಾತ್ರ ರಾಮಚರಣ್ ಹಾಗೂ ಎಸ್ ಜೆ ಸೂರ್ಯ ಅವರ ಪರ್ಫಾರ್ಮೆನ್ಸ್ ಲಿಟ್ರಲಿ ಸಿನಿಮಾ ಎಷ್ಟೇ ಬೋರ್ ಇದ್ರೂ ಕೂಡ ಕೇವಲ ಇವರ ಪರ್ಫಾರ್ಮೆನ್ಸ್ ಇಂದ ಮಾತ್ರ ಥಿಯೇಟರ್ ಅಲ್ಲಿ ಕುಂತಿರ್ತೀವಿ
ಇವರಿಬ್ಬರನ್ನ ಬಿಟ್ರೆ ಅಂಜಲಿ ಸುನಿಲ್ ಜಯರಾಮ್ ಶ್ರೀಕಾಂತ್ ಹಾಗೂ ಸಮುದ್ರ ಕಣಿ ಅವರು ಕೂಡ ಚೆನ್ನಾಗಿ ಆಕ್ಟ್ ಮಾಡಿದ್ದಾರೆ ಸಿನಿಮಾದಲ್ಲಿ ಕಿಯಾ ಆರ್ ಅಡ್ವಾಣಿ ಅವರಿಗೆ ಯಾವುದೇ ರೀತಿ ಪ್ರಾಮುಖ್ಯತೆ ಇಲ್ಲ ಕೇವಲ ಹಾಡುಗಳಿಗೆ ಮಾತ್ರ ಇವರನ್ನ ಸೀಮಿತ ಮಾಡಿಕೊಂಡಿದ್ದಾರೆ ಸಿನಿಮಾಟೋಗ್ರಾಫಿ ಇಸ್ ಗುಡ್ ಸುಮಾರು ಕಡೆ ಮೋಕೋಬೋರ್ಡ್ ಶಾಟ್ಸ್ ನ ಯೂಸ್ ಮಾಡಿದ್ದಾರೆ ಈ ಸಿನಿಮಾದಲ್ಲಿನ ತಮನ್ ಅವರ ಸಾಂಗ್ಸ್ ಕೇಳೋದಕ್ಕೆ ಚೆನ್ನಾಗಿಲ್ಲದೆ ಇದ್ದರೂ ಕೂಡ ಡೈರೆಕ್ಟರ್ ಶಂಕರ್ ಅವರು ಅದನ್ನ ಸ್ಕ್ರೀನ್ ಮೇಲೆ ತುಂಬಾ ಗ್ರಾಂಡ್ ಆಗಿ ತಂದಿದ್ದಾರೆ ಬಟ್ ತಮನ್ ಅವರು ಬಿಜಿಎಂ ಅಲ್ಲಿ ಮಾತ್ರ ಅವರ ಬೆಸ್ಟ್ ವರ್ಕ್ ನ ಕೊಟ್ಟಿದ್ದಾರೆ ಇನ್ ಫ್ಯಾಕ್ಟ್ ಸಿನಿಮಾದಲ್ಲಿ
ಸುಮಾರು ಸೀನ್ಸ್ ನ ಇವರ ಬಿಜಿಎಂ ಎಲಿವೇಟ್ ಮಾಡಿದೆ ಇನ್ನು ಈ ಸಿನಿಮಾಗೆ ಕಥೆಯನ್ನು ಕೊಟ್ಟಿರೋದು ತಮಿಳಿನ ಮತ್ತೊಬ್ಬ ಪ್ರಖ್ಯಾತ ಡೈರೆಕ್ಟರ್ ಆದ ಕಾರ್ತಿಕ್ ಸುಬ್ಬರಾಜ್ ಅವರು ಯಾವುದೇ ಡೈರೆಕ್ಟರ್ ಆಗ್ಲಿ ಅವನ ಹತ್ರ ಒಂದು ಬೆಸ್ಟ್ ಕಥೆ ಇದ್ದಾಗ ಆ ಸಿನಿಮಾನ ಅವನೇ ಡೈರೆಕ್ಟ್ ಮಾಡ್ತಾನೆ ಹೊರತು ಬೇರೆಯವರಿಗೆ ಯಾಕೆ ಕೊಡ್ತಾನೆ ಅದೇ ಇಲ್ಲಿ ಆಗಿರೋದು ಡೈರೆಕ್ಟರ್ ಶಂಕರ್ ಅವರು ಕಾರ್ತಿಕ್ ಸುಬ್ಬರಾಜ್ ಅವರ ಕಥೆ ತಗೊಂಡು ಅದಕ್ಕೆ ಅವರೇ ಸ್ಕ್ರೀನ್ ಪ್ಲೇ ಮಾಡ್ಕೊಂಡಿದ್ದಾರೆ ಅದರ ಜೊತೆಗೆ ಅವರ ಹಳೆಯ ಸಿನಿಮಾಗಳ ಒಂದಷ್ಟು ರೆಫರೆನ್ಸ್ ನ ಕೂಡ ಆಡ್ ಮಾಡಿದ್ದಾರೆ ಇತ್ತೀಚೆಗೆ ಶಂಕರ್ ಅವರ ಸಿನಿಮಾಗಳನ್ನ ನೀವು ಗಮನಿಸಿದರೆ ಇವರ ಬಹುತೇಕ
ಸಿನಿಮಾಗಳು ಪ್ರೊಡ್ಯೂಸರ್ಸ್ ನ ಲಾಸ್ ಮಾಡ್ತಿದೆ ಅದು ಕೂಡ ಅಷ್ಟಿಷ್ಟ ಅಲ್ಲ ಪ್ರೊಡ್ಯೂಸರ್ಸ್ ನ ಹ್ಯೂಜ್ ಲಾಸ್ ಗೆ ತಳ್ತಿದ್ದಾರೆ ಹಾನೆಸ್ಟ್ಲಿ ಸಿನಿಮಾ ಸ್ಟಾರ್ಟ್ ಆದಾಗ ಶಂಕರ್ ಅವರು ಒಂದು ಒಳ್ಳೆ ಕಂಬ ಬ್ಯಾಕ್ ಕೊಡ್ಲಿ ಅನ್ಕೊಂಡಿದ್ದೆ ಬಟ್ ಅದು ಆಗ್ಲಿಲ್ಲ ಮೂವಿಯಲ್ಲಿ ಯಾವುದೇ ರೀತಿ ಅಡಲ್ಟ್ ಕಂಟೆಂಟ್ ಇರಲ್ಲ ಹಾಗಂತ ಈ ಸಿನಿಮಾ ವ್ಯಾಲ್ಯೂ ಫಾರ್ ಮನಿನು ಅಲ್ಲ ಇದರ ಮೇಲು ಈ ಸಿನಿಮಾನ ನೋಡಬೇಕು ಅಂದ್ರೆ ಅದು ನಿಮಗೆ ಬಿಟ್ಟಿದ್ದು ಬರೆದಿಟ್ಟುಕೊಳ್ಳಿ ಈ ಸಿನಿಮಾ ಡಿಸಾಸ್ಟರ್ ಆಗುತ್ತೆ ಸೋ ಇದಾಗಿರುತ್ತೆ ಗೇಮ್ ಚೇಂಜ್ ಸಿನಿಮಾದ ಬಗ್ಗೆನ ನನ್ನ ಒಂದು ಒಪಿನಿಯನ್
ಥ್ಯಾಂಕ್ಯು